BlogLove Life

First Kiss: ಮೊದಲ ಮುತ್ತು , ಪ್ರೇಮದ ತುತ್ತು

ಮೊದಲಿಗೆ ಇದೊಂದು ಅನುಭವ ಕಥನವಾಗಿದ್ದು, ಒಬ್ಬ ಪ್ರೀಮಿಯೊಬ್ಬ ತನ್ನ ಪ್ರೇಯಸಿಯೊಂದಿಗೆ ಮೊದಲ ಮುತ್ತನ್ನು ಹಂಬಲಿಸೋ ಅನುಭವದ ಕುರಿತು ಈ ಕಥನ ವಿವರಿಸಿದ್ದು, ಪ್ರೀತಿ ಎನ್ನುವುದು ಕೇವಲ ಮಾತುಗಳಲ್ಲ, ಅದು ಎರಡು ಜೀವಗಳ ನಡುವಿನ ಮೌನದ ಭಾಷೆ. ಹರೀಶ್ ಮತ್ತು ಕಾವ್ಯರ ಈ ಕಥೆ ಕೂಡ ಹಾಗೆಯೇ. ಮೊಬೈಲ್ ಸಂಭಾಷಣೆಯಲ್ಲಿ ಅತಿ ಸಾಹಸಿಯಾಗಿ ಮಾತನಾಡುತ್ತಿದ್ದ ಹುಡುಗ, ಪ್ರೇಯಸಿಯ ಮುಂದೆ ಬಂದಾಗ ಹೇಗೆ ಮಗುವಿನಂತೆ ನಾಚುತ್ತಾನೆ ಮತ್ತು ಅವರ ಮೊದಲ ಚುಂಬನ ಹೇಗೆ ಅವಿಸ್ಮರಣೀಯವಾಯಿತು ಎಂಬುದೇ ಈ ಕಥನದ ಸಾರ. ದಯವಿಟ್ಟು ಓದಿಗರು ಕೊನೆಯವರೆಗೆ ಇದನ್ನು ವೀಕ್ಷಿಸಿ, ತಮ್ಮ ಅಭಿಪ್ರಾಯವನ್ನು ಕಮೆಂಟ್ಸ್‌ ಮಾಡವುದರ ಮೂಲಕ ಬೆಂಬಲಿಸಬೇಕು. ಬನ್ನಿ ಕಥೆಯನ್ನು ಪ್ರಾರಂಭಿಸೋಣ.

ಆ ಪ್ರಶಾಂತವಾದ ಉದ್ಯಾನದಲ್ಲಿ, ಆ ಸಂಜೆಯಲ್ಲಿ ನಮ್ಮಿಬ್ಬರನ್ನು ಬಿಟ್ಟರೆ ಮತ್ಯಾರೂ ಇರಲಿಲ್ಲ. ಅಷ್ಟೊಂದು ಮೈಕೊರೆಯುವ ಚಳಿಯಲ್ಲಿಯೂ ಇಬ್ಬರ ಮೈ ಬಿಸಿಯೇರಿತ್ತು. ಆದರೆ ನನಗೆ ಕರೆ ಮಾಡಿದಾಗಲೆಲ್ಲಾ ಎಲ್ಲಾ ತಿಳಿದ ಮಹಾಶೂರನಂತೆ ಮಾತನಾಡುತ್ತಿದ್ದ ಹರೀಶ್ ಆ ಸಮಯ ಏನೊಂದೂ ಮಾತನಾಡದೆ ಸುಮ್ಮನೆ ಕುಳಿತಿದ್ದ. ನಾವಿಬ್ಬರೂ ಹಾಗೆ ಮೌನವಾಗಿ ಕುಳಿತು ಗಂಟೆಗಳೇ ಕಳೆದು ಹೋಗಿದ್ದವು. ಆದರೂ ಯಾರೊಬ್ಬರೂ ಮುಂದುವರೆಯುವ ಪ್ರಯತ್ನವನ್ನೇ ಮಾಡಿರಲಿಲ್ಲ.


ಅದೆಂತಹ ನಾಚಿಕೆ ಅವನನ್ನು ಆವರಿಸಿತ್ತೋ ಗೊತ್ತಿಲ್ಲ. ನಾನಂತೂ ಭಯದಿಂದ ಅರ್ಧ ಜೀವವಾಗಿ ಹೋಗಿದ್ದೆ. ಆದರೂ ನನ್ನ ಹತ್ತಿರ ಕುಳಿತುಕೊಳ್ಳಲು ಮುಜುಗರಪಟ್ಟುಕೊಳ್ಳುತ್ತಿದ್ದವನ ಮೈಗೆ ಮೈ ತಾಕುವಂತೆ ನಾನೇ ಹೋಗಿ ಕುಳಿತಿದ್ದೆ. ಒಬ್ಬ ಹುಡುಗನ ಮೊದಲ ಮೈ ಸ್ಪರ್ಶವದು. ಅವನ ಮೈಗೆ ನನ್ನ ಮೈ ತಾಗುತ್ತಿದ್ದಂತೆಯೇ ದೇಹದಲ್ಲಿ ವಿದ್ಯುತ್ ಸಂಚಾರವಾದಂತೆ ಭಾಸವಾಯಿತು. ಇಷ್ಟಾದರೂ ಅವನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಒಂದೆರಡು ನಿಮಿಷ ಕಾದು ಧೈರ್ಯ ಮಾಡಿ ಅವನ ಕೈಯೊಳಗೆ ನಾನೇ ಕೈ ಇಟ್ಟರೂ, ಹಿಡಿದುಕೊಳ್ಳಲು ನಾಲೈದು ನಿಮಿಷ ತೆಗೆದುಕೊಂಡಿದ್ದ ಹರೀಶ್. ಮೊಬೈಲ್‌ನಲ್ಲಿ ಮಾತನಾಡುವಾಗ ಮಾತ್ರ ಒಂದು ಸಾರಿ ನನ್ನ ಕೈಗೆ ಸಿಗು, ಯಾವತ್ತೂ ನೀನು ನನ್ನ ಬಿಟ್ಟಿರಲೇ ಬಾರದ ಹಾಗೆ ಮಾಡಿಬಿಡುತ್ತೀನಿ ಅನ್ನುವ ಮಾತುಗಳನ್ನು ಹೇಳುತ್ತಿದ್ದ.


ಆವತ್ಯಾಕೋ ಮುದ್ದು ಪೆದ್ದು ಮನಸ್ಸಿನ ನನ್ನ ಹರೀಶನಿಗೆ ತುಂಬಾನೇ ನಾಚಿಕೆ ಆವರಿಸಿತ್ತು. ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲುಕೂಡ ಹಿಂದೆ ಮುಂದೆ ನೋಡುತ್ತಿತ್ತು. ಏನೊಂದು ಮಾತನಾಡದೆ ಸುಮ್ಮನೆ ಕುಳಿತುಕೊಂಡವನನ್ನು ಹಿಡಿದೆಳೆದು, ಬಿಗಿದಪ್ಪಿಕೊಳ್ಳಲೇ? ಅವನ ತುಟಿಗೆ ನನ್ನ ತುಟಿಯ ಸೇರಿಸಿ ಕಣ್ಮುಚ್ಚಿ ಚುಂಬಿಸಿಬಿಡಲೇ?


ಅವನ ಅಂಗಿಯ ಗುಂಡಿಯನು ಒಂದೊಂದಾಗಿ ಬಿಚ್ಚುತ ಎದೆಯ ಮೇಲೆ ಮುತ್ತಿನ ಸುರಿಮಳೆಗೈಯಲೇ? ಲವ್ ಯು ಕಣೋ ಚಿನ್ನ ಎಂದು ಅವನ ಕಿವಿಯೊಳಗೆ ಪಿಸುಗುಡುತ ಆ ಕಿವಿಯ ಕಚ್ಚಿ ಬಿಡಲೇ? ಮಗುವಂತೆ ಅವನನ್ನು ಬಳಸಿ ನನ್ನ ಎದೆಗವಚಿಕೊಂಡು ಮುದ್ದಿಸಿಬಿಡಲೇ? ಏನೇನೋ ಯೋಚಿಸುತ್ತಿತ್ತು ನನ್ನ ಮನ.


ಮೊದಲ ಪ್ರೀತಿಯ ಇಂತಹ ಮಧುರ ಕ್ಷಣಗಳು


ಮೊದಲ ಮುತ್ತಿನಲ್ಲಿ ಮಿಂದೇಳುವ ಸಮಯದಿ ನಾವಿಬ್ಬರು ಹಾಗೆ ಮೌನವಾಗಿ ಕುಳಿತುಕೊಂಡಿದ್ದು ಯಾವ ಪ್ರೇಮಿಯೂ ಒಪ್ಪಲಾರ. ನಾನಂತು ಆ ಸುಂದರ ಘಳಿಗೆಗಾಗಿ ಅದೆಷ್ಟು ದಿವಸದಿಂದ ಕಾದಿದ್ದೇನೋ ನನಗೇ ಗೊತ್ತಿಲ್ಲ. ನನ್ನ ಗೆಳತಿಯ ಮದುವೆಯಲ್ಲಿ ಪರಿಚಯವಾದ ಹರೀಶ್‌ನನ್ನು ಆ ಮದುವೆಯಲ್ಲಿ ಬಿಟ್ಟರೆ ಮತ್ತೊಮ್ಮೆ ನಾನು ಭೇಟಿಯಾಗಿರಲಿಲ್ಲ. ನಾಳೆ ಭೇಟಿಯಾಗೋಣ, ನಾಡಿದ್ದು ಭೇಟಿಯಾಗೋಣ ಅನ್ನುತ್ತ ಒಂದು ವರುಷವೇ ಕಳೆದು ಹೋಗಿತ್ತು. ಅಂದು ಪರಿಚಯವಾದ ನಾವಿಬ್ಬರು ಪ್ರೀತಿಸಿದ್ದು ಮಾತ್ರ ಮೊಬೈಲ್‌ನಲ್ಲಿಯೇ. ಅವನ ತುಂಟತನ, ಅವನ ಚೇಷ್ಟೆ, ಅವನು ನಗಿಸುವ ರೀತಿ ಯಾಕೋ ನನಗೆ ತುಂಬಾನೇ ಇಷ್ಟವಾಗಿ ಹೋಗಿತ್ತು.


ಹರೀಶನ ಮಾತುಗಳನ್ನು ಕೇಳುವುದೆಂದರೇನೇ ಒಂದು ಹಬ್ಬ. ಮಾತಿನಲ್ಲಿಯೇ ಹೊಸ ಲೋಕ ಸೃಷ್ಟಿಸಬಲ್ಲ ಜಾದುಗಾರ,ಮಾತಿನಮಲ್ಲ ಹರೀಶನಿಗೆ ನಮ್ಮ ಮೊದಲ ಚುಂಬನದ
ಬಗ್ಗೆಯಂತೂ ಬಹು ದೊಡ್ಡ ಕನಸಿತ್ತು. ನಮ್ಮ ಮೊದಲ ಚುಂಬನ ಹಾಗಿರಬೇಕು ಹೀಗಿರಬೇಕು ಎಂದು ಏನೇನೋ ಹೇಳುವಾಗ ನನ್ನ ಮೈ ಜುಮ್ ಎನ್ನದೆ ಇರುತ್ತಿರಲಿಲ್ಲ.ಬೇಡ ಬೇಡ ಅಂದರೂ ಅವನು ಪದೇ ಪದೇ ಚುಂಬನದ ಬಗ್ಗೆ ಮಾತನಾಡುವಾಗ ನನ್ನಲ್ಲಿ ಏನೋ ಒಂದು ಹೊಸ ಅನುಭವವಾಗುತ್ತಿತ್ತು. ಪ್ರತಿ ಬಾರಿಯೂ ಅವನು ಚುಂಬನದ ಬಗ್ಗೆ ನನಗೆ ಹೇಳುವಾಗ ನನ್ನನ್ನೇ ನಾನು ಮರೆಯುತ್ತಿದ್ದೆ.


ಕಣ್ಮುಚ್ಚಿ ಅವನನ್ನೇ ನೆನೆಸಿಕೊಳ್ಳುತ್ತಿದ್ದವಳಿಗೆ ಅವನನ್ನೇ ಬಿಗಿದಪ್ಪಿ ಚುಂಬಿಸಿದಂತೆ ಅನುಭವವಾಗುತ್ತಿತ್ತು. ನಾವಿಬ್ಬರು ಭೇಟಿಯಾಗುವ ಮೊದಲ ದಿನವೇ ನನಗೆ ನಿನ್ನ ತುಟಿಗಳು ಬೇಕು ಕಾವ್ಯ. ಆ ನಿನ್ನ ತುಟಿಗಳನ್ನು ಕಚ್ಚಿ ಅದರೊಳಗಿನ ಜೇನನ್ನು ಹೀರಬೇಕು ನಾನು. ದಿನಗಟ್ಟಲೆ ನಿನ್ನ ಮಧುರ ತುಟಿಯನು ಹೀರುತ ಈ ಲೋಕವನ್ನು ಮರೆಯಬೇಕು ಅಂದಿದ್ದವನು ಇವತ್ತು ನನ್ನ ತುಟಿಗಳು ಅವನ ತುಟಿಗಳ ಸ್ಪರ್ಶ ಸುಖಕ್ಕಾಗಿ ಕಾದಿದ್ದರೂ ಅವುಗಳೆಡೆಗೆ ತಿರುಗಿಯೂ ಕೂಡ ನೋಡುತ್ತಿರಲಿಲ್ಲ. ಚುಂಬನದ ಬಗ್ಗೆ ಏನೇನೋ ಹೇಳುತ್ತಿದ್ದ ಹರೀಶ್ ಯಾಕೆ ಇನ್ನೂ ಸುಮ್ಮನೆ ಕುಳಿತಿದ್ದಾನೆ ಅನ್ನುವುದೇ ನನಗೆ ಅರ್ಥವಾಗುತ್ತಿರಲಿಲ್ಲ. ನನ್ನಲ್ಲಿ ಇಲ್ಲ ಸಲ್ಲದ ಆಸೆ ಹುಟ್ಟಿಸಿ, ಎಲ್ಲದಕ್ಕೂ ನಾನು ಈಗ ತಯಾರಾಗಿ ನಿಂತಾಗ ಅವನು ಮಾತ್ರ ಹೀಗೆ ಕುಳಿತಿದ್ದನ್ನು ನೋಡಿ ಒಂದೆಡೆ ಕೋಪ ಉಕ್ಕಿ ಬರುತ್ತಿತ್ತು. ಏನೊಂದು ಗೊತ್ತಿಲ್ಲದಿದ್ದವಳಿಗೆ ಚುಂಬನದ ಬಗ್ಗೆ ಹೊಸ ಕಲ್ಪನೆ ಹುಟ್ಟಿಸಿ, ಮನದೊಳಗೆ ಏನೇನೋ ಆಸೆಗಳ ಬೀಜ ಬಿತ್ತಿ ಈಗ ಮಾತ್ರ ತಾನು ಏನು ಅರಿಯದವನಂತೆ ಕೂತಿರುವ ಅವನ ಕುತ್ತಿಗೆಗೆ ಕೈ ಹಾಕಿ. ಯಾಕೋ ಹೀಗೆ ಮಾಡುತ್ತಿದ್ದ ಪಾಪಿ ಎಂದು ಕೇಳುತ್ತಿತ್ತು ಹೃದಯ.


ನೋಡು ನೋಡು ತ್ತಿದ್ದಂತೆಯೇ ಕತ್ತಲಾವರಿಸ ತೊಡಗಿತ್ತು. ಉದ್ಯಾನದ ಸುತ್ತಲಿನ ದೀಪಗಳು ಒಂದೊಂದಾಗಿ ಹತ್ತಿಕೊಂಡಿದ್ದವು. ಚಳಿ ಇನ್ನೂ ಜಾಸ್ತಿಯಾಗುತ್ತಲೇ ಇತ್ತು. ಆದರೆ ನಮ್ಮಿಬ್ಬರ ಮೈಯೊಳಗಿನ ಬಿಸಿ ಮಾತ್ರ ಕಡಿಮೆಯಾಗಲಿಲ್ಲ. ಪ್ರತಿ ಕ್ಷಣಕ್ಷಣ ಆ ಬಿಸಿ ಏರುತ್ತಲೇ ಇತ್ತು. ದೀಪದ ಬೆಳಕಿನಲ್ಲಿ ಹೊಳೆಯುವ ಅವನ ಕಣ್ಣುಗಳು ಕಾವ್ಯ, ಮೊದಲ ಚುಂಬನದ ಮೊದಲ ಹೆಜ್ಜೆ ನೀನೇ ಪ್ರಾರಂಭಿಸು ಅನ್ನುತ್ತಿದ್ದವು. ಹೇಗೆ ಮೊದಲ ಹೆಜ್ಜೆ ಇಡಲಿ ನಾನು ಅಂದುಕೊಳ್ಳುತ್ತಲೇ ಕೈಯ ಹಿಡಿತವನ್ನು ಸಡಿಲಿಸಿ ಅವನ ಕೈಯನ್ನೊಮ್ಮೆ ಮಧುರವಾಗಿ ಸವರಿದೆ. ಅದೇನಾಯಿತೋ ಅವನಿಗೆ ಗೊತ್ತಿಲ್ಲ. ಒಮ್ಮೆಲೇ ತಿರುಗಿ ನನ್ನನ್ನು ಬಿಗಿದಪ್ಪಿಕೊಂಡಿದ್ದ. ಒಂದೈದು ನಿಮಿಷ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡವನನ್ನು ನಾನು ಅಷ್ಟೇ ಗಟ್ಟಿಯಾಗಿ ತಬ್ಬಿಕೊಂಡಿದ್ದೆ. ಸಣ್ಣ ಗಾಳಿಯೂ ಕೂಡ ತೂರದ ರೀತಿಯಲ್ಲಿ ನಮ್ಮಿಬ್ಬರ ಅಪ್ಪುಗೆ ಇತ್ತು. ಆ ಅಪ್ಪುಗೆಯ ಬಿಗಿತಕ್ಕೆ ಇಬ್ಬರ ಮೈಯ ಬಿಸಿ ಇಮ್ಮಡಿಯಾಗಿತ್ತು. ನನ್ನ ಸಹನೆಯ ಕಟ್ಟೆ ಒಡೆದು ಹೋದಂತಾಗಿ ಅವನ ಮುಖವನ್ನು ಹಿಡಿದು ನಾನೇ ಅವನ ತುಟಿಯನ್ನು ಕಚ್ಚಿ ಚುಂಬಿಸಿ ಬಿಡೋಣ ಅನ್ನಿಸಿದರೂ ಧೈರ್ಯ ನನ್ನಲ್ಲಿರಲಿಲ್ಲ. ಏನಾದರಾಗಲಿ, ಅದು ಅವನಿಂದಲೇ ಪ್ರಾರಂಭವಾಗಲಿ ಅಂದುಕೊಂಡು ಹಾಗೆಯೇ ಕಣ್ಮುಚ್ಚಿ ಆ ‘ಅಪ್ಪುಗೆಯ ಸುಖವನ್ನು ಆ ಕ್ಷಣ ಪೂರ್ತಿ ಅನುಭವಿಸಿದ್ದೆ.


ಕೆಲ ಸಮಯದ ನಂತರ ಅಪ್ಪುಗೆಯನ್ನು ಸಡಿಲಿಸಿ ನನ್ನ ಮುಖವನ್ನು ಎರಡೂ ಕೈಯಲ್ಲಿ ಹಿಡಿದುಕೊಂಡವನೇ ಲವ್ ಯೂ ಸೋ ಮಚ್ ಕಾವ್ಯ ಅಂದಿದ್ದ. ಅವನ ಆ ಮಾತಿಗೆ ಉತ್ತರಿಸದ ನಾನು ಕಣ್ಮುಚ್ಚಿ ನನ್ನ ಮುಖವನ್ನು ಅವನೆಡೆಗೆ ತಿರುಗಿಸಿ ತುಟಿಯನ್ನು ಅರಳಿಸಿ ಮೊದಲ ಮುತ್ತಿಗೆ ಅಣಿಯಾಗಿ ನಿಂತಿದ್ದೆ. ಮೊದಲ ಚುಂಬನದ ಬಗ್ಗೆ ಹಲವಾರು ಕನಸು ಕಂಡವಳು ಅಂದು ಆ ಸಂಜೆಯಲ್ಲಿ ಅವನ ತುಟಿಯ ಸ್ಪರ್ಶಕ್ಕಾಗಿ ಹಾತೊರೆಯುತ್ತಿದ್ದೆ. ಯಾವಾಗ ಅವನ ತುಟಿಯ ಸ್ಪರ್ಶದ ಸುಖ ನನ್ನ ತುಟಿಗಾಗುವುದೋ, ಯಾವಾಗ ಅವನು ನನ್ನ ತುಟಿಯ ಮೇಲೆ ಸಣ್ಣದೊಂದು ಗಾಯದ ಗುರುತನ್ನು ಮೂಡಿಸುವನೋ ಅನ್ನುತ್ತ ಎದುರು ನೋಡುತ್ತಿದ್ದವಳ ಹಣೆಯ ಮೇಲೊಂದು ಸಿಹಿ ಮುತ್ತಿನ ಅನುಭವವಾಯಿತು. ಕಣ್ಣೆರೆದು ನೋಡಿದೆ. ಹರೀಶ್ ದೀರ್ಘವಾದ ಮುತ್ತೊಂದನ್ನು ನೀಡಿದ್ದ.


ಅವನು ಚುಂಬಿಸಿದ ಹಣೆಯ ಭಾಗ ಕೆಂಪಾಗಿ ಹೋಗಿತ್ತು. ನಮ್ಮದು ಪರಿಶುದ್ಧವಾದ ಪ್ರೇಮ ಕಾವ್ಯ. ಮೊದಲ ಭೇಟಿಯಲ್ಲಿ ನಿನ್ನ ತುಟಿಗಳು ಬೇಕು ಅನ್ನುತ್ತಿದ್ದ ನನಗೆ ನಿನ್ನನ್ನು ನೋಡಿದ ಮೇಲೆ ಅದು ತಪ್ಪು ಎಂದು ಅನ್ನಿಸಿತು. ನಮ್ಮ ಈ ಸುಂದರ, ನಿರ್ಮಲ ಪ್ರೇಮದ ಮೊದಲ ಚುಂಬನದ ಗುರುತು ನಿನ್ನ ಹಣೆಯ ಮೇಲೆ ಈಗಾಗಲೇ ಮೂಡಿಯಾಗಿದೆ ಕಾವ್ಯ. ಇದುವೇ ನಮ್ಮ ಮೊದಲ ಚುಂಬನ, ಇನ್ಯಾವತ್ತೂ ಬೇರೆ ರೀತಿಯಲ್ಲಿ ನಾನು ಕಲ್ಪಿಸಿಕೊಳ್ಳಲಾರೆ ಎಂದು ನನ್ನ ಮುಖವನ್ನು ಹಿಡಿದು ಹೇಳುತ್ತಿದ್ದವನ ಮನಸ್ಸು ಏನೆಂದು ನನಗೆ ಅರ್ಥವಾಗಿ ಹೋಗಿತ್ತು. ಮರು ಮಾತನಾಡದೆ ಅವನನ್ನು ಅಪ್ಪಿಕೊಂಡಿದ್ದೆ.
ಜಗತ್ತಿನ ಅತಿ ಅಮೂಲ್ಯ ರತ್ನವೊಂದು ನನಗೆ ಸಿಕ್ಕಿದಷ್ಟು ಖುಶಿಯಾಗಿತ್ತು, ಕಣ್ಣಂಚಿನಲ್ಲಿ ಮೂಡಿದ ಕಣ್ಣೀರ ಹನಿಯೊಂದು ನಮ್ಮ ಪರಿಶುದ್ಧ ಪ್ರೀತಿಗೆ ಶುಭ ಹಾರೈಸಿ ಮರೆಯಾಗಿತ್ತು. ಲವ್ ಯು ಸೋ ಮಚ್ ಕಣೋ ಪುಟ್ಟ ಎಂದು ಅವನ ಎದೆಗೊಂದು ಮುತ್ತನ್ನಿಟ್ಟು ಅವನನ್ನು ಮತ್ತೆ ಗಟ್ಟಿಯಾಗಿ ತಬ್ಬಿಕೊಂಡಿದ್ದೆ. ಅವನ ಮೊದಲ ಚುಂಬನ ಅವನ ಪ್ರೀತಿಯ ಆಳವನ್ನು ಕೂಗಿ ಕೂಗಿ ಹೇಳಿತ್ತು. ನನ್ನ ಮನ ಅವನ ಪರಿಶುದ್ಧ ಪ್ರೇಮಕ್ಕೆ ಮತ್ತೊಮ್ಮೆ ಶರಣಾಗಿ ಹೋಗಿತ್ತು. ಅವನು ಹೇಳಿದ ಮಾತು ನನ್ನ ಕಣ್ಣಲ್ಲಿ ನೀರು ತರಿಸಿತು—“ಕಾವ್ಯ, ಮೊದಲ ಭೇಟಿಯಲ್ಲಿ ನಿನ್ನ ತುಟಿಗಳು ಬೇಕು ಅಂದುಕೊಂಡಿದ್ದೆ. ಆದರೆ ನಿನ್ನನ್ನು ನೋಡಿದ ಮೇಲೆ ಅನಿಸಿತು, ನಮ್ಮ ಪ್ರೀತಿ ದೈಹಿಕ ಆಕರ್ಷಣೆಗಿಂತ ಪವಿತ್ರವಾದುದು. ನಿನ್ನ ಹಣೆಯ ಮೇಲಿರುವ ಈ ಕೆಂಪು ಗುರುತೇ ನಮ್ಮ ನಿರ್ಮಲ ಪ್ರೇಮದ ಮೊದಲ ಚುಂಬನ.”

ಓದುಗರೇ, ಈ ಸುಂದರ ಅನುಭವ ಕಥನ ನಿಮಗೆ ಇಷ್ಟವಾಯಿತೇ? ಮೊದಲ ಪ್ರೀತಿಯ ಇಂತಹ ಮಧುರ ಕ್ಷಣಗಳು ನಿಮ್ಮ ಬದುಕಿನಲ್ಲೂ ಸಂಭವಿಸಿವೆಯೇ? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ!

 

 

Leave a Reply

Your email address will not be published. Required fields are marked *