BlogHealth Tips

ನಿಜ. ವಯಸ್ಸಾಗುವುದಕ್ಕೆ ಭಯಪಡಬೇಕಾಗಿಲ್ಲ. (ಋತುಬಂಧ ಮತ್ತು ಲೈಂಗಿಕ ಆರೋಗ್ಯದ ಕುರಿತು ಆಪ್ತ ಸಲಹೆಗಳು)


🌸 ನಿಜ, ವಯಸ್ಸಾಗುವುದಕ್ಕೆ ಭಯಪಡಬೇಕಾಗಿಲ್ಲ: ಋತುಬಂಧ ಮತ್ತು ಲೈಂಗಿಕ ಆರೋಗ್ಯದ ಆಪ್ತ ಸಲಹೆಗಳು | Menopause and sexual health tips

ವಿಜಯಸೂರ್ಯ ಇನ್ಫೋ ಓದುಗರಿಗೆ ನಮಸ್ಕಾರ. ನಮ್ಮ ಸಮಾಜದಲ್ಲಿ ಋತುಬಂಧದ ನಂತರದ ಲೈಂಗಿಕತೆ ಅಥವಾ ದೈಹಿಕ ಬದಲಾವಣೆಗಳ ಬಗ್ಗೆ ಮಾತನಾಡುವುದು ಇಂದಿಗೂ ಒಂದು ರೀತಿಯ ಸಂಕೋಚದ ವಿಷಯ. ಆದರೆ, ಅರಿವಿಲ್ಲದ ಮೌನಕ್ಕಿಂತ, ಅರಿವಿನಿಂದ ಕೂಡಿದ ಆರೋಗ್ಯವಂತ ಜೀವನ ಶ್ರೇಷ್ಠ. Menopause and sexual health tips

ನನ್ನ ಅನುಭವದ ಮಾತು: ಆತ್ಮವಿಶ್ವಾಸವೇ ನಿಜವಾದ ಸೌಂದರ್ಯ

40-50ರ ಹಂತ ತಲುಪಿದಾಗ ಅನೇಕ ಮಹಿಳೆಯರು “ನನ್ನ ಅಗತ್ಯ ಯಾರಿಗೂ ಇಲ್ಲ” ಅಥವಾ “ನನ್ನ ಆಕರ್ಷಣೆ ಮುಗಿದುಹೋಯಿತು” ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ, ಋತುಬಂಧ ಎಂಬುದು ಸ್ತ್ರೀತ್ವದ ಅಂತ್ಯವಲ್ಲ, ಅದು ಬದುಕಿನ ಒಂದು ಪ್ರಬುದ್ಧ ಅಧ್ಯಾಯದ ಆರಂಭ. ನಿಮ್ಮ ದೇಹದಲ್ಲಿನ ಬದಲಾವಣೆಗಳನ್ನು ಗೌರವದಿಂದ ಸ್ವೀಕರಿಸಿ. ಸರಿಯಾದ ವೈದ್ಯಕೀಯ ಮಾರ್ಗದರ್ಶನ ಮತ್ತು ಸಂಗಾತಿಯ ಬೆಂಬಲವಿದ್ದರೆ, ಈ ಹಂತದ ಜೀವನವೂ ಅತ್ಯಂತ ಸುಖಮಯವಾಗಿರಲು ಸಾಧ್ಯ.

ಪ್ರಶ್ನೆ 1: ಲೈಂಗಿಕತೆಯಲ್ಲಿ ಆಸಕ್ತಿ ಇಲ್ಲದಿರುವುದು ಸಹಜವೇ?

ಸಂದೇಹ:ನಿನಗೆ sexನಲ್ಲಿ ಆಸಕ್ತಿ ಇಲ್ಲ’ ಅಂತ ನನ್ನ ಗಂಡ ಯಾವಾಗಲೂ ನನಗೆ ಹೇಳುತ್ತಿರುತ್ತಾರೆ. ನಾನು ಸೆಕ್ಸ್ ವಿರೋಧಿಯಲ್ಲ. ಆದರೆ ಅದರಿಂದ ನನಗೆ ಖುಷಿ ಸಿಗುವುದಿಲ್ಲ. ನನ್ನ ಭಾವನೆ ಸಹಜವಾ ಇಲ್ಲವೇ ನಾನು ಆಪ್ತಸಮಾಲೋಚಕರ ಬಳಿಗೆ ಹೋಗಬೇಕಾ?

Woman sitting on bed holding her stomach, showing signs of discomfort or pain indoors.


ನಿಮ್ಮ ಪ್ರಶ್ನೆಯಿಂದ ತಿಳಿಯುವುದೇನೆಂದರೆ ನಿಮಗೆ ಲೈಂಗಿಕತೆ ಬಗ್ಗೆ ಆಸಕ್ತಿ ಇದೆ. ಆದರೆ ಖುಷಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ನಿಮಗೆ ಆಸಕ್ತಿ ಇಲ್ಲದಂತಾಗಿರಬಹುದು. ಆಸಕ್ತಿಯ ಕೊರತೆಯು ಕೆಲವರಲ್ಲಿ ಸಹಜವಾಗಿ ಜೈವಿಕವಾಗಿಯೇ ಇರುತ್ತದೆ. ಗಂಡ ಹೆಂಡಿರ ಪರಸ್ಪರ ಸಂಬಂಧ, ನಿಮ್ಮ ದೈಹಿಕ, ಮಾನಸಿಕ ಆರೋಗ್ಯ, ಪರಿಸರ, ನಿಮ್ಮ ದೈನಂದಿನ ಕೆಲಸ, ಸುಸ್ತು ಸಂಕಟಗಳು, ಕೆಲಸದ ಒತ್ತಡ ಮುಂತಾದವು ಲೈಂಗಿಕ ಆಸಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ಲೈಂಗಿಕ ಸಂಪರ್ಕದ ಸಮಯದಲ್ಲಿ ನಿಮ್ಮ ಆಸೆ, ಆಕಾಂಕ್ಷೆಗಳು, ನಿರೀಕ್ಷೆಗಳಿಗೆ ನಿಮ್ಮ ಯಜಮಾನರು ಸ್ಪಂದಿಸುತ್ತಾರಾ, ನಿಮ್ಮ ದೇಹದ ಉದ್ರೇಕವನ್ನು ಸರಿಯಾದ ಹಂತಕ್ಕೆ ಕೊಂಡೊಯ್ಯುತ್ತಾರಾ ಎಂಬುದೂ ನಿಮ್ಮ ಆಸಕ್ತಿ, ಖುಷಿಯ ಭಾವನೆ (orgasm) ಗಳಿಗೆ ಮುಖ್ಯವಾಗುತ್ತದೆ.
ಇದೆಲ್ಲದಕ್ಕಿಂತ ಮುಖ್ಯವಾಗಿ ಗಂಡನಲ್ಲಿ ನಿಮಿರು ದೌರ್ಬಲ್ಯ, ಶೀಘ್ರಸ್ಥಲನ ಮುಂತಾದ ತೊಂದರೆಗಳಿದ್ದರೆ ಹೆಂಡತಿಗೆ ಆಸಕ್ತಿ ಕಡಿಮೆಯಾಗಬಹುದು, ನಿರಾಸೆಯಾಗಬಹುದು ಮತ್ತು ತೃಪ್ತಿ ಅನುಭವಿಸಲು ಸಾಧ್ಯವಾಗದಿರಬಹುದು. ಲೈಂಗಿಕ ನಿರಾಸಕ್ತಿಯಿಂದ ನಿಮ್ಮಿಬ್ಬರಿಗೂ ನಿರಾಸೆಯಾಗುತ್ತಿದ್ದರೆ ಖಂಡಿತ ಇಬ್ಬರೂ ಲೈಂಗಿಕ ತಜ್ಞರ ಬಳಿ ಆಪ್ತಸಮಾಲೋಚನೆ ಮಾಡಿಸಿಕೊಳ್ಳಿ.

ಪ್ರಶ್ನೆ 2: ಮುಟ್ಟು ನಿಂತ ನಂತರ ಲೈಂಗಿಕ ಜೀವನಕ್ಕೆ ಕೊನೆಯೇ?

ಸಂದೇಹ: ಮುಟ್ಟು ನಿಂತ ನಂತರವೂ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು ಎನ್ನುತ್ತಾರೆ. ಆದರೆ ನನಗೆ ನನ್ನ ದೇಹ ಆ ಕ್ರಿಯೆಗೆ ಸೂಕ್ತವಾಗಿಲ್ಲ. ಎಲ್ಲವೂ ಸಡಿಲವಾಗಿದ್ದು ನನ್ನ ಗಂಡ ನನ್ನ ಬಗ್ಗೆ ಅಸಹ್ಯ ಪಡಬಹುದು ಎನ್ನುವ ಕಾರಣದಿಂದಾಗಿ ಅವರನ್ನು ದೂರವಿಡುತ್ತಿದ್ದೇನೆ. ಇದಕ್ಕೆ ನಿಮ್ಮ ಸಲಹೆ ಏನು?

bridge, ship, sea, nature, hats, people

ಬಹಳಷ್ಟು ಸ್ತ್ರೀಯರು ಋತುಬಂಧ (ಮುಟ್ಟುನಿಲ್ಲುವುದು), ಮುಟ್ಟಿಗೆ ಕೊನೆಯಾಗುವುದರ ಜೊತೆಗೆ ಲೈಂಗಿಕತೆಗೂ ಕೊನೆ ಎಂದು ತಿಳಿದಿದ್ದಾರೆ. ವೈದ್ಯಕೀಯ ರಂಗದ ಹೊಸ ಆವಿಷ್ಕಾರಗಳಿಂದಾಗಿ, ಮತ್ತು ಕಾಯಿಲೆ ನಿಯಂತ್ರಣಗಳು, ಚಿಕಿತ್ಸೆಗಳು ಹೆಚ್ಚು ಲಭ್ಯ ಇರುವುದರಿಂದಾಗಿ ಮಹಿಳೆಯರ ಆಯಸ್ಸು ಹೆಚ್ಚುತ್ತಿದೆ. ಮತ್ತು ಅವರು ಹೆಚ್ಚು ಕಾಲ ಅಂದರೆ 90-100 ವರ್ಷದ ತನಕ ಬದುಕುವ ಸಾಧ್ಯತೆ ಹೆಚ್ಚಿದೆ. ಮುಟ್ಟು ನಿಲ್ಲುವ ವಯಸ್ಸು 48 ರಿಂದ 50 ವಯಸ್ಸಿಗಾದರೆ ಸ್ತ್ರೀಯರು ಜೀವಿತದ ಸುಮಾರು ಮೂರನೇ ಒಂದರಷ್ಟು ಭಾಗವನ್ನು ಋತುಬಂಧದ ನಂತರ ಕಳೆಯುತ್ತಾರೆ. ಹಾಗಾಗಿ ಅವರಿಗೆ ಜೀವನದ ಗುಣಮಟ್ಟ, ದೈಹಿಕ, ಮಾನಸಿಕ ಆರೋಗ್ಯ ಮುಖ್ಯವಾಗುತ್ತದೆ. ಲೈಂಗಿಕ ಸಂಪರ್ಕ, ಲೈಂಗಿಕತೆ ಅವರು ಬದುಕಿರುವವರೆಗೆ ಮುಂದುವರೆದರೆ ಅದರಿಂದ ತೊಂದರೆ ಏನೂ ಇಲ್ಲ. ಇದು ಜೀವನದ ಗುಣಮಟ್ಟಕ್ಕೆ, ಆರೋಗ್ಯಕ್ಕೆ, ಗಂಡಹೆಂಡತಿಯ ಪರಸ್ಪರ ಸಂಬಂಧಕ್ಕೆ ಸಹಕಾರಿಯಾಗುತ್ತದೆ.ಋತುಬಂಧದ ನಂತರ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಚರ್ಮ, ಕೂದಲು, ಸ್ತನಗಳು, ಹಾಗೂ ಜನನಾಂಗಗಳಲ್ಲಿ ಬದಲಾವಣೆಗಳಾಗುತ್ತವೆ. ಗಂಡ ಹೆಂಡತಿಯ ಆಕರ್ಷಣೆ ಬರೀ ದೇಹ ಸೌಂದರ್ಯಕ್ಕೆ ಸೀಮಿತವಾಗಿರುವುದಿಲ್ಲ ಅದಕ್ಕೂ ಮೀರಿ ಇನ್ನೂ ಹೆಚ್ಚು ಆಳವಾಗಿರುತ್ತದೆ. ನೀವು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಕೀಳರಿಮೆ ಬಿಡಬೇಕು. ನೀವು ಇರುವಂತೆಯೇ ನಿಮ್ಮನ್ನು ಒಪ್ಪಿಕೊಳ್ಳಬೇಕು.

ಇತ್ತೀಚಿನ ದಿನಗಳಲ್ಲಿಸೌಂದರ್ಯ ವರ್ಧಕಗಳು, ಶಸ್ತ್ರಚಿಕಿತ್ಸೆಗಳು, ಜನನಾಂಗವನ್ನು ಪುನಃಶ್ವೇತನಗೊಳಿಸುವ ವಿಧಾನಗಳು ಲಭ್ಯವಿದೆ. ದೇಹಕ್ಕೆ ವಯಸ್ಸಾಗುವುದು ಸಹಜ ಆದರೆ ನೀವು ಚೆನ್ನಾಗಿ ಕಾಣಿಸಲು ಅದಕ್ಕಾಗಿ ಕೆಲವು ವಿಧಾನಗಳನ್ನು ಅಳವಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ. ಅದರಿಂದ ನಿಮ್ಮ ಆಕರ್ಷಣೆ ಹೆಚ್ಚಿಸಿಕೊಳ್ಳಬಹುದು. ನಿಮಗೆ ಯೋನಿ ಸಡಿಲವಾಗಿದೆ ಎನಿಸಿದರೆ ಸ್ತ್ರೀರೋಗ ತಜ್ಞರಿಂದ ಪರೀಕ್ಷಿಸಿಕೊಳ್ಳಿ. ಯೋನಿ ಬಿಗಿಗೊಳಿಸುವ ಶಸ್ತ್ರಚಿಕಿತ್ಸೆ ಮಾಡಬಹುದು. ಸಹಜ ಪ್ರಸವವಾಗಿರುವ ಸ್ತ್ರೀಯರಲ್ಲಿ ಕೆಲವೊಮ್ಮೆ ಯೋನಿ ಸಡಿಲವಾಗುವ, ಗರ್ಭಕೋಶ, ಮೂತ್ರಕೋಶ ಕೆಳಗೆ ಜರುಗುವ ಸಾಧ್ಯತೆ ಇರುತ್ತದೆ. ಅವುಗಳನ್ನು ಸರಿಪಡಿಸಬಹುದು. ನಿಮ್ಮ ಯಜಮಾನರನ್ನು ಇದರಿಂದಾಗಿಯೇ! ದೂರವಿಡುವ ಅವಶ್ಯಕತೆ ಇಲ್ಲ.

ಋತುಬಂಧದ ನಂತರ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಚರ್ಮ, ಕೂದಲು, ಸ್ತನಗಳು, ಹಾಗೂ ಜನನಾಂಗಗಳಲ್ಲಿ ಬದಲಾವಣೆಗಳಾಗುತ್ತವೆ. ನೀವು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಕೀಳರಿಮೆ ಬಿಡಬೇಕು. ನೀವು ಇರುವಂತೆಯೇ ನಿಮ್ಮನ್ನು ಒಪ್ಪಿಕೊಳ್ಳಬೇಕು
– ಹೆಸರಾಂತ ವೈದ್ಯರು

ಪ್ರಶ್ನೆ 3: ಮುಟ್ಟು ನಿಂತು ವರ್ಷಗಳ ನಂತರ ಮತ್ತೆ ರಕ್ತಸ್ರಾವವಾದರೆ?

ಸಂದೇಹ:ಮುಟ್ಟು ನಿಂತು ಅನೇಕ ವರ್ಷಗಳಾಗಿವೆ ಆದರೆ ಕಳೆದ ತಿಂಗಳು ಪುನಃ ಮುಟ್ಟಾಗಿದೆ. ಭಯ ಆಗ್ತಾ ಇದೆ. ಏನು ಮಾಡಲಿ ಡಾಕ್ಟೇ?

Crop unrecognizable female touching belly while having acute pain in stomach sitting on couch

40 ವಯಸ್ಸಿನ ಆಸುಪಾಸಿನಲ್ಲಿ ಒಂದು ವರ್ಷದವರೆಗೆ ಮುಟ್ಟು ಬರಲಿಲ್ಲವಾದರೆ ಋತುಬಂಧವಾಗಿದೆ ಎಂದು ಅರ್ಥ. ಅದರ ನಂತರ ಮತ್ತೆ ಋತುಸ್ರಾವ ಕಾಣಿಸಿಕೊಂಡರೆ ಅದನ್ನು ‘ಋತುಬಂಧದ ನಂತರದ ರಕ್ತಸ್ರಾವ’ ಅಥವಾ “Post menopausal bleeding” 2. ಇದನ್ನು ಹಾಗೇ ಬಿಡಬಾರದು. ಸ್ತ್ರೀರೋಗ ತಜ್ಞರ ಬಳಿ ಪರೀಕ್ಷಿಸಿಕೊಳ್ಳಬೇಕು.

  • ತಪಾಸಣೆ ಅಗತ್ಯ: ಇದು ಗರ್ಭಕೋಶದ ಒಳಪದರದಲ್ಲಿನ ತೊಂದರೆ ಅಥವಾ ಕ್ಯಾನ್ಸರ್‌ನ ಆರಂಭಿಕ ಸೂಚನೆಯೂ ಆಗಿರಬಹುದು.
  • ಪರೀಕ್ಷೆಗಳು: ತಕ್ಷಣ ಸ್ತ್ರೀರೋಗ ತಜ್ಞರನ್ನು ಕಂಡು ಪ್ಯಾಪ್ ಸ್ಮಿಯರ್ (Pap Smear), ಸ್ಕ್ಯಾನಿಂಗ್ ಅಥವಾ ಬಯಾಪ್ಸಿ ಮಾಡಿಸಿಕೊಳ್ಳಿ. ಆರಂಭದಲ್ಲೇ ಪತ್ತೆಹಚ್ಚಿದರೆ ಎಲ್ಲದಕ್ಕೂ ಚಿಕಿತ್ಸೆ ಇದೆ, ಭಯಪಡುವ ಅಗತ್ಯವಿಲ್ಲ.

ಪ್ರಶ್ನೆ 4: ಮುಟ್ಟು ನಿಂತ ಮೇಲೆ ದೇಹ ಬೇಗ ಮುಪ್ಪಾಗುತ್ತದೆಯೇ?

ಸಂದೇಹ:ಮುಟ್ಟು ನಿಂತ ನಂತರ ದೇಹಕ್ಕೆ ಬೇಗ ವಯಸ್ಸಾಗಲು ಶುರುವಾಗತ್ತೆ ಅಂತ ಒಬ್ಬಳು ಗೆಳತಿ ಹೇಳಿದ್ದಳು ಅದು ನಿಜಾನಾ ಡಾಕ್ಟೇ?

anatomy, woman, human, body, skin, organs, schema, lung, biology, teaching, people, science, medicine, nursing, anatomy, anatomy, anatomy, human, human, body, body, body, body, body, biology, teaching, people, science, science, science, medicine

ಮುಟ್ಟು ನಿಂತ ಬಳಿಕ ದೇಹದಲ್ಲಿ ಅಂಡಾಶಯದ ಕೆಲಸ ಮುಗಿಯುತ್ತ ಬರುವುದರಿಂದ ಸ್ತ್ರೀ ಹಾರ್ಮೋನು ಈಟ್ರೊಜನ್ನ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದಾಗಿ ದೇಹ, ಮನಸ್ಸುಗಳಲ್ಲಿ ಹಲವಾರು ಬದಲಾವಣೆಗಳಾಗುತ್ತವೆ. ದೇಹದ ಚರ್ಮದಲ್ಲಿ ಬದಲಾವಣೆ, ಕೂದಲು ಬೆಳ್ಳಗಾಗುವುದು, ಸ್ತನಗಳ ಗಾತ್ರ ಕುಗ್ಗುವುದು, ಯೋನಿ ತೆಳ್ಳಗಾಗುವುದು, ಮೂತ್ರನಾಳ, ಮೂತ್ರ ಕೋಶದಲ್ಲಿ ಬದಲಾವಣೆ, ಮುಂತಾದುವುಗಳು ಕಾಣಿಸಿಕೊಳ್ಳುತ್ತವೆ. ನಿಧಾನವಾಗಿ ಹೃದಯ ರಕ್ತನಾಳಗಳಲ್ಲಿ, ಮೂಳೆಗಳಲ್ಲಿ ಕೂಡ ಬದಲಾವಣೆಗಳಾಗುತ್ತವೆ. ಬೆವರು ಬರುವುದು, ಮೈ ಬಿಸಿಯಾಗುವುದು, ಸುಸ್ತು, ಸಂಕಟ, ಆತಂಕ, ಖಿನ್ನತೆ ಕೆಲವರಲ್ಲಿ ಕಾಣಿಸಬಹುದು ಎಲ್ಲರಲ್ಲೂ ಒಂದೇ ತೆರನಾದ ತೀವ್ರತೆ ಇರುವುದಿಲ್ಲ. ತೀವ್ರತೆಗನುಗುಣವಾಗಿ ಚಿಕಿತ್ಸೆ ಕೊಡಬಹುದು. ವಯಸ್ಸಾಗುವುದಕ್ಕೆ ಭಯಪಡಬೇಕಾಗಿಲ್ಲ ಇರುವಷ್ಟು ದಿನ ನಿಮ್ಮ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಂಡು ಆಕರ್ಷಣೆಯನ್ನು ಉಳಿಸಿಕೊಳ್ಳಲು ಹಲವಾರು ವಿಧಾನಗಳು ಲಭ್ಯವಿದೆ.

ದೇಹಕ್ಕೆ ವಯಸ್ಸಾಗುವುದು ಸಹಜ ಪ್ರಕ್ರಿಯೆ. ಆದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಇಂದಿನ ವೈದ್ಯಕೀಯ ಕ್ಷೇತ್ರದಲ್ಲಿ ಹತ್ತಾರು ಮಾರ್ಗಗಳಿವೆ. ಆತ್ಮವಿಶ್ವಾಸವೇ ಸೌಂದರ್ಯದ ಮೊದಲ ಮೆಟ್ಟಿಲು.

5. ದೈಹಿಕ ಬದಲಾವಣೆಗಳಿಗೆ ಪೂರಕ ಜೀವನಶೈಲಿ

ಋತುಬಂಧದ ನಂತರ ಯೋನಿ ತೆಳ್ಳಗಾಗುವುದು ಮತ್ತು ಒಣಗುವುದು (Vaginal Dryness) ಸಾಮಾನ್ಯ. ಇದರಿಂದ ಲೈಂಗಿಕ ಕ್ರಿಯೆಯ ಸಮಯದಲ್ಲಿ ನೋವಾಗಬಹುದು. ಇದಕ್ಕೆ ಪರಿಹಾರವಾಗಿ ವೈದ್ಯರ ಸಲಹೆ ಮೇರೆಗೆ ‘ಲ್ಯೂಬ್ರಿಕೆಂಟ್ಸ್’ (Lubricants) ಅಥವಾ ಈಸ್ಟ್ರೊಜನ್ ಕ್ರೀಮ್‌ಗಳನ್ನು ಬಳಸಬಹುದು. ಇದು ನಿಮ್ಮ ಲೈಂಗಿಕ ಜೀವನವನ್ನು ಮತ್ತೆ ಸುಖಮಯವಾಗಿಸುತ್ತದೆ.

6. ಮಾನಸಿಕ ಸಮತೋಲನ ಮತ್ತು ಯೋಗ

ಋತುಬಂಧದ ಸಮಯದಲ್ಲಿ ‘ಹಾಟ್ ಫ್ಲಶಸ್’ (Hot Flashes – ಮೈ ಬೆವರುವುದು ಅಥವಾ ಬಿಸಿಯಾಗುವುದು), ಅತಿಯಾದ ಸಿಟ್ಟು ಮತ್ತು ಅಸಹನೆ ಕಾಡಬಹುದು. ಈ ಸಮಯದಲ್ಲಿ ಯೋಗ ಮತ್ತು ಪ್ರಾಣಾಯಾಮ ಮಾಡುವುದು ಮಾನಸಿಕ ಶಾಂತಿಗೆ ಬಹಳ ಸಹಕಾರಿ. ನಿಮ್ಮನ್ನು ನೀವು ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ.

7. ಮಹಿಳೆಯರ ಆತ್ಮವಿಶ್ವಾಸ ಮತ್ತು ಸಾಮಾಜಿಕ ಬೆಂಬಲ

ವಯಸ್ಸಾಗುತ್ತಿರುವಂತೆ ಮಹಿಳೆಯರು ತಮ್ಮ ಕುಟುಂಬಕ್ಕಾಗಿ ಮಾಡುವ ತ್ಯಾಗ ಅಷ್ಟಿಷ್ಟಲ್ಲ. ಆದರೆ ತಾವು ಐವತ್ತರ ಹಂತ ತಲುಪಿದಾಗ “ನನ್ನ ಅಗತ್ಯ ಯಾರಿಗೂ ಇಲ್ಲ” ಎಂಬ ಭಾವನೆ ಮೂಡಬಹುದು. ಈ ಭಾವನೆಯೇ ದೈಹಿಕ ಕಾಯಿಲೆಗಳಿಗಿಂತ ಹೆಚ್ಚು ಅಪಾಯಕಾರಿ. ಈ ಹಂತದಲ್ಲಿ ಹಳೆಯ ಗೆಳೆಯರೊಂದಿಗೆ ಕಾಲ ಕಳೆಯುವುದು, ಪ್ರವಾಸ ಹೋಗುವುದು ಮತ್ತು ತಮ್ಮ ಸ್ವಾತಂತ್ರ್ಯವನ್ನು ಆನಂದಿಸುವುದನ್ನು ಕಲಿಯಬೇಕು. ಕುಟುಂಬ ಸದಸ್ಯರು ಕೂಡ ಮಹಿಳೆಯರ ಈ ಬದಲಾವಣೆಯ ಹಂತವನ್ನು ಅರ್ಥಮಾಡಿಕೊಂಡು ಅವರಿಗೆ ಬೆಂಬಲವಾಗಿ ನಿಲ್ಲಬೇಕು.

8. ಪೌಷ್ಟಿಕಾಂಶದ ಮಹತ್ವ

ಋತುಬಂಧದ ನಂತರ ಮೂಳೆಗಳು ದುರ್ಬಲಗೊಳ್ಳುವುದರಿಂದ ಸುಲಭವಾಗಿ ಮುರಿತ ಸಂಭವಿಸಬಹುದು. ಆದ್ದರಿಂದ ಆಹಾರದಲ್ಲಿ ಹಾಲು, ಮೊಸರು, ಸೊಪ್ಪು ಮತ್ತು ಕಾಳುಗಳನ್ನು ಹೆಚ್ಚಾಗಿ ಬಳಸಬೇಕು. ಅತಿಯಾದ ಸಕ್ಕರೆ ಮತ್ತು ಉಪ್ಪಿನ ಬಳಕೆಯನ್ನು ಕಡಿಮೆ ಮಾಡುವುದರಿಂದ ಅಧಿಕ ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಿಸಬಹುದು. ಹಸಿರು ತರಕಾರಿಗಳು ಮತ್ತು ಹಣ್ಣುಗಳು ಚರ್ಮದ ಕಾಂತಿಯನ್ನು ಕಾಪಾಡಲು ನೆರವಾಗುತ್ತವೆ.

9. ಸಂಕೋಚ ಬಿಟ್ಟು ವೈದ್ಯರ ಬಳಿ ಚರ್ಚಿಸಿ

ಭಾರತೀಯ ಮಹಿಳೆಯರಲ್ಲಿ ಕಂಡುಬರುವ ದೊಡ್ಡ ಸಮಸ್ಯೆಯೆಂದರೆ ಜನನಾಂಗಕ್ಕೆ ಸಂಬಂಧಿಸಿದ ತೊಂದರೆಗಳನ್ನು ವೈದ್ಯರ ಬಳಿ ಹೇಳಿಕೊಳ್ಳಲು ಹಿಂಜರಿಯುವುದು. ಮೂತ್ರ ಸೋರಿಕೆ (Urinary Incontinence) ಅಥವಾ ಲೈಂಗಿಕ ನೋವುಗಳನ್ನು ಅವರು ವಯಸ್ಸಾದ ಮೇಲೆ ಬರುವ ಸಹಜ ತೊಂದರೆಗಳೆಂದು ಭಾವಿಸಿ ಸಹಿಸಿಕೊಳ್ಳುತ್ತಾರೆ. ಆದರೆ ಇಂದು ಪ್ರತಿಯೊಂದು ಸಮಸ್ಯೆಗೂ ಅತ್ಯಂತ ಸರಳ ಮತ್ತು ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿವೆ. ಸಂಕೋಚ ಬಿಟ್ಟು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡುವುದು ನಿಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ.

10. ಸಂಗಾತಿಯ ಪಾತ್ರ

ಋತುಬಂಧದ ಹಂತದಲ್ಲಿ ಗಂಡನ ಪಾತ್ರ ಅತ್ಯಂತ ದೊಡ್ಡದು. ಹೆಂಡತಿಯ ದೈಹಿಕ ಬದಲಾವಣೆಗಳನ್ನು ಅಣಕಿಸದೆ, ಅವಳಿಗೆ ಮಾನಸಿಕ ಧೈರ್ಯ ತುಂಬಬೇಕು. ಲೈಂಗಿಕ ಕ್ರಿಯೆಯಲ್ಲಿ ಒತ್ತಾಯ ಮಾಡದೆ, ಅವಳ ಆರಾಮಕ್ಕೆ ಆದ್ಯತೆ ನೀಡಬೇಕು. ಇಬ್ಬರೂ ಜೊತೆಯಾಗಿ ನಡಿಗೆ ಅಥವಾ ವ್ಯಾಯಾಮ ಮಾಡುವುದು ನಿಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ಹೊಸ ಅಧ್ಯಾಯದ ಆರಂಭ

Healthy older couple, women's health consultation in Kannada.


ಋತುಬಂಧ ಮತ್ತು ಲೈಂಗಿಕ ಆರೋಗ್ಯ: ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

1. ಋತುಬಂಧ ಅಥವಾ ಮೆನೋಪಾಸ್ ಎಂದರೇನು?

ಉತ್ತರ: ಒಬ್ಬ ಮಹಿಳೆಗೆ ಸತತವಾಗಿ 12 ತಿಂಗಳುಗಳ ಕಾಲ ಮುಟ್ಟು (Menstruation) ಬರದೇ ಇದ್ದರೆ ಅದನ್ನು ಋತುಬಂಧ ಅಥವಾ ಮೆನೋಪಾಸ್ ಎನ್ನಲಾಗುತ್ತದೆ. ಇದು ಸಾಮಾನ್ಯವಾಗಿ 45 ರಿಂದ 55 ವರ್ಷದ ವಯಸ್ಸಿನ ಆಸುಪಾಸಿನಲ್ಲಿ ಸಂಭವಿಸುತ್ತದೆ.

2. ಮುಟ್ಟು ನಿಂತ ನಂತರ ಲೈಂಗಿಕ ಆಸಕ್ತಿ ಕಡಿಮೆಯಾಗುವುದು ಸಹಜವೇ?

ಉತ್ತರ: ಹೌದು, ದೇಹದಲ್ಲಿ ಈಸ್ಟ್ರೊಜನ್ ಹಾರ್ಮೋನುಗಳ ಮಟ್ಟ ಕಡಿಮೆಯಾಗುವುದರಿಂದ ಮತ್ತು ಯೋನಿ ಒಣಗುವಿಕೆಯಿಂದಾಗಿ (Vaginal Dryness) ಲೈಂಗಿಕ ಆಸಕ್ತಿ ಅಥವಾ ಖುಷಿ ಕಡಿಮೆಯಾಗಬಹುದು. ಇದು ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಂದ ಉಂಟಾಗುವ ಸಹಜ ಪ್ರಕ್ರಿಯೆ.

3. ಋತುಬಂಧದ ನಂತರ ಲೈಂಗಿಕ ಕ್ರಿಯೆಯ ಸಮಯದಲ್ಲಿ ನೋವಾಗುತ್ತಿದ್ದರೆ ಏನು ಮಾಡಬೇಕು?

ಉತ್ತರ: ಯೋನಿ ಒಣಗುವಿಕೆಯಿಂದ ನೋವು ಉಂಟಾಗುತ್ತಿದ್ದರೆ ವೈದ್ಯರ ಸಲಹೆಯ ಮೇರೆಗೆ ಉತ್ತಮ ಗುಣಮಟ್ಟದ ‘ಲ್ಯೂಬ್ರಿಕೆಂಟ್ಸ್’ (Lubricants) ಅಥವಾ ಈಸ್ಟ್ರೊಜನ್ ಕ್ರೀಮ್‌ಗಳನ್ನು ಬಳಸಬಹುದು. ಇದು ಲೈಂಗಿಕ ಜೀವನವನ್ನು ಸುಖಮಯವಾಗಿಸಲು ನೆರವಾಗುತ್ತದೆ.

4. ಮುಟ್ಟು ನಿಂತ ಅನೇಕ ವರ್ಷಗಳ ನಂತರ ಮತ್ತೆ ರಕ್ತಸ್ರಾವವಾದರೆ ಅದು ಅಪಾಯಕಾರಿಯೇ?

ಉತ್ತರ: ಹೌದು, ಇದನ್ನು ‘Post menopausal bleeding’ ಎನ್ನಲಾಗುತ್ತದೆ. ಇದು ಗರ್ಭಕೋಶದ ಒಳಪದರದಲ್ಲಿನ ತೊಂದರೆ ಅಥವಾ ಕ್ಯಾನ್ಸರ್‌ನ ಆರಂಭಿಕ ಸೂಚನೆಯೂ ಆಗಿರಬಹುದು. ಹಾಗಾಗಿ ತಕ್ಷಣ ಸ್ತ್ರೀರೋಗ ತಜ್ಞರನ್ನು ಕಂಡು ಪ್ಯಾಪ್ ಸ್ಮಿಯರ್ (Pap Smear) ಅಥವಾ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದು ಕಡ್ಡಾಯ.

5. ಋತುಬಂಧದ ಸಮಯದಲ್ಲಿ ಕಾಡುವ ‘ಹಾಟ್ ಫ್ಲಶಸ್’ (Hot Flashes) ಎಂದರೇನು?

ಉತ್ತರ: ಹಠಾತ್ತಾಗಿ ಮೈ ಬಿಸಿಯಾಗುವುದು, ಅತಿಯಾಗಿ ಬೆವರುವಿಕೆ ಮತ್ತು ಎದೆಬಡಿತ ಹೆಚ್ಚಾಗುವುದನ್ನು ‘ಹಾಟ್ ಫ್ಲಶಸ್’ ಎನ್ನಲಾಗುತ್ತದೆ. ಇದು ದೇಹದಲ್ಲಿನ ಹಾರ್ಮೋನು ಬದಲಾವಣೆಯಿಂದ ಉಂಟಾಗುತ್ತದೆ.

6. ಋತುಬಂಧದ ನಂತರ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಉತ್ತರ: ಈ ಹಂತದಲ್ಲಿ ಮೂಳೆಗಳು ದುರ್ಬಲಗೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಕ್ಯಾಲ್ಸಿಯಂಯುಕ್ತ ಆಹಾರಗಳಾದ ಹಾಲು, ಮೊಸರು, ಸೊಪ್ಪು ಮತ್ತು ಕಾಳುಗಳನ್ನು ಹೆಚ್ಚಾಗಿ ಸೇವಿಸಬೇಕು. ಅತಿಯಾದ ಸಕ್ಕರೆ ಮತ್ತು ಉಪ್ಪಿನ ಬಳಕೆಯನ್ನು ಕಡಿಮೆ ಮಾಡಬೇಕು.

7. ಋತುಬಂಧದ ಮಾನಸಿಕ ಒತ್ತಡವನ್ನು ನಿಭಾಯಿಸುವುದು ಹೇಗೆ?

ಉತ್ತರ: ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಮಾಡುವುದರಿಂದ ಮಾನಸಿಕ ಶಾಂತಿ ಪಡೆಯಬಹುದು. ನಿಮ್ಮನ್ನು ನೀವು ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಗೆಳೆಯರೊಂದಿಗೆ ಕಾಲ ಕಳೆಯುವುದು ಖಿನ್ನತೆಯನ್ನು ದೂರವಿಡಲು ಸಹಕಾರಿ.

8. ಯೋನಿ ಸಡಿಲವಾಗಿದೆ ಎಂದು ಅನ್ನಿಸಿದರೆ ಅದಕ್ಕೆ ಚಿಕಿತ್ಸೆ ಇದೆಯೇ?

ಉತ್ತರ: ಹೌದು, ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಅನೇಕ ಸುಧಾರಿತ ವಿಧಾನಗಳಿವೆ. ಯೋನಿ ಬಿಗಿಗೊಳಿಸುವ ಶಸ್ತ್ರಚಿಕಿತ್ಸೆಗಳು ಅಥವಾ ಜನನಾಂಗವನ್ನು ಪುನಃಶ್ವೇತನಗೊಳಿಸುವ ವೈದ್ಯಕೀಯ ವಿಧಾನಗಳ ಮೂಲಕ ಇದನ್ನು ಸರಿಪಡಿಸಿಕೊಳ್ಳಬಹುದು.

9. ಈ ಹಂತದಲ್ಲಿ ಸಂಗಾತಿಯ ಪಾತ್ರ ಏಕೆ ಮುಖ್ಯ?

ಉತ್ತರ: ಮಹಿಳೆಯು ದೈಹಿಕ ಮತ್ತು ಮಾನಸಿಕ ಬದಲಾವಣೆಯ ಹಂತದಲ್ಲಿದ್ದಾಗ ಸಂಗಾತಿಯು ಅವಳನ್ನು ಅಣಕಿಸದೆ ಧೈರ್ಯ ತುಂಬಬೇಕು. ಲೈಂಗಿಕ ಕ್ರಿಯೆಯಲ್ಲಿ ಒತ್ತಾಯ ಮಾಡದೆ ಅವಳ ಆರಾಮಕ್ಕೆ ಆದ್ಯತೆ ನೀಡುವುದು ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

10. ಋತುಬಂಧದ ನಂತರವೂ ಸೌಂದರ್ಯ ಮತ್ತು ಆಕರ್ಷಣೆಯನ್ನು ಉಳಿಸಿಕೊಳ್ಳಲು ಸಾಧ್ಯವೇ?

ಉತ್ತರ: ಖಂಡಿತ ಸಾಧ್ಯ. ದೇಹಕ್ಕೆ ವಯಸ್ಸಾಗುವುದು ನೈಸರ್ಗಿಕ ಪ್ರಕ್ರಿಯೆ. ಆದರೆ ಉತ್ತಮ ಜೀವನಶೈಲಿ, ಪೌಷ್ಟಿಕ ಆಹಾರ ಮತ್ತು ಮುಖ್ಯವಾಗಿ ಆತ್ಮವಿಶ್ವಾಸವನ್ನು ಉಳಿಸಿಕೊಳ್ಳುವ ಮೂಲಕ ನಿಮ್ಮ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳಬಹುದು.


ಹೆಚ್ಚಿನ ಮಾಹಿತಿಗಾಗಿ ನೋಡಿ: vijayasuryainfo.com

ತೀರ್ಮಾನ: ಸ್ತ್ರೀತ್ವದ ಹೊಸ ಪಯಣ

ಋತುಬಂಧ ಎಂಬುದು ಸ್ತ್ರೀತ್ವದ ಅಂತ್ಯವಲ್ಲ, ಬದಲಾಗಿ ಅದು ಬದುಕಿನ ಒಂದು ಹೊಸ ಮತ್ತು ಪ್ರಬುದ್ಧ ಅಧ್ಯಾಯದ ಆರಂಭ. ವಯಸ್ಸಾಗುವ ಪ್ರಕ್ರಿಯೆಯನ್ನು ನಾವು ವಿರೋಧಿಸುವ ಬದಲು, ಅದನ್ನು ಗೌರವದಿಂದ ಸ್ವೀಕರಿಸಲು ಕಲಿಯಬೇಕು. ದೈಹಿಕ ಬದಲಾವಣೆಗಳು ನಿಸರ್ಗದ ನಿಯಮವಾದರೂ, ನಮ್ಮ ಮನಸ್ಸಿನ ಉತ್ಸಾಹ ಮತ್ತು ಆತ್ಮವಿಶ್ವಾಸ ನಮ್ಮ ಕೈಯಲ್ಲಿದೆ. ಸರಿಯಾದ ಆರೋಗ್ಯ ಮಾಹಿತಿ, ಪೌಷ್ಟಿಕ ಆಹಾರ, ಮತ್ತು ಮುಕ್ತ ಮನಸ್ಸಿನ ಸಂವಹನವಿದ್ದರೆ ಋತುಬಂಧದ ನಂತರದ ಜೀವನವೂ ಅತ್ಯಂತ ಸುಖಮಯ ಮತ್ತು ಅರ್ಥಪೂರ್ಣವಾಗಿರಲು ಸಾಧ್ಯ. ನೆನಪಿಡಿ, ನೀವು ನಿಮ್ಮ ದೇಹಕ್ಕಿಂತ ಮಿಗಿಲಾದವರು; ನಿಮ್ಮ ಅನುಭವ ಮತ್ತು ಜ್ಞಾನವೇ ನಿಮ್ಮ ನಿಜವಾದ ಸೌಂದರ್ಯ. ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಆದರೆ ವಯಸ್ಸಿನ ಬಗ್ಗೆ ಆತಂಕ ಬೇಡ. ಸುಂದರವಾದ ಈ ಪಯಣವನ್ನು ನಗುನಗುತ ಸವಿಯಿರಿ.

ನನ್ನದೊಂದು ಪ್ರಶ್ನೆ: “ಋತುಬಂಧದ ಹಂತದಲ್ಲಿ ಮಹಿಳೆಯರಿಗೆ ಕುಟುಂಬದವರು ನೀಡಬಹುದಾದ ಅತ್ಯುತ್ತಮ ಬೆಂಬಲ ಯಾವುದು ಎಂದು ನಿಮಗನ್ನಿಸುತ್ತದೆ? ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.” 👇


ವಿಜಯಸೂರ್ಯ ಇನ್ಫೋ ಕನ್ನಡ (vijayasuryainfo.com) – ಮಹಿಳಾ ಆರೋಗ್ಯ ಮತ್ತು ಲೈಂಗಿಕ ಸ್ವಾಸ್ಥ್ಯದ ಕುರಿತಾದ ಮುಕ್ತ ಚರ್ಚೆಗಾಗಿ ಸದಾ ನಿಮ್ಮೊಂದಿಗೆ.

ಗಮನಿಸಿ: ಇಂತಹ ಉಪಯುಕ್ತ ಮಾಹಿತಿಗಳನ್ನು ಪಡೆಯಲು ನಮ್ಮ ಸೋಷಿಯಲ್ ಮೀಡಿಯಾ ಸೇರಿ:

📢 ನಮ್ಮ WhatsApp ಚಾನಲ್ ಸೇರಿ: Join Now

🔷 ನಮ್ಮ Telegram ಗ್ರೂಪ್ ಸೇರಿ: Join Now

ಇತರ ಲೇಖನಗಳು:

-ಮಧುಮೇಹ ನಿಯಂತ್ರಣಕ್ಕೆ ಪರಿಣಾಮಕಾರಿ ಮನೆಮದ್ದುಗಳು

-ಚಿನ್ನದಷ್ಟೇ ಬೆಲೆಬಾಳುವ ಈ ಆಹಾರಗಳ ಬಗ್ಗೆ ನಿಮಗೆ ತಿಳಿದಿದೆಯೇ? ಆಹಾರ ತಿನ್ನುವ ಮೊದಲು, ಯೋಚಿಸಿ.

-ಪ್ರತಿದಿನ ಹಾಲಿನ ಚಹಾ (Milk Tea) ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ? ಸತ್ಯಾ-ಅಸತ್ಯದ ಸಂಪೂರ್ಣ ಮಾಹಿತಿ!

-ಗರ್ಭಿಣಿಯರಲ್ಲಿ ಸಕ್ಕರೆ ಕಾಯಿಲೆ (Diabetes): ತಾಯಿ ಮತ್ತು ಮಗುವಿನ ರಕ್ಷಣೆ ಹೇಗೆ? ಇಲ್ಲಿದೆ ಮಾಹಿತಿ.

vijayasuryainfo@gmail.com

Administrator Profile Name: Suresha S Role: Founder & Chief Administrator, Vijaya Surya InfoProfessional Overview Suresha S is the driving force behind Vijaya Surya Info, a digital platform dedicated to simplifying complex government information for the general public. With a strong background in administrative processes and a deep understanding of state-level welfare programs, Suresha ensures that every piece of content published is accurate, timely, and actionable.Mission Under Suresha's leadership, the portal focuses on:Transparency: Making the details of the Right to Information (RTI) Act accessible to all.Empowerment: Providing clear guides on government schemes, scholarships, and job opportunities.Community Support: Acting as a reliable bridge between government departments and the citizens who need their services most.Contact & Vision Suresha is committed to the digital growth of Karnataka’s information landscape. By leveraging SEO-driven content and a user-first approach, he aims to make vijayasuryainfo.com the most trusted Kannada-language resource for administrative and career updates.

2 thoughts on “ನಿಜ. ವಯಸ್ಸಾಗುವುದಕ್ಕೆ ಭಯಪಡಬೇಕಾಗಿಲ್ಲ. (ಋತುಬಂಧ ಮತ್ತು ಲೈಂಗಿಕ ಆರೋಗ್ಯದ ಕುರಿತು ಆಪ್ತ ಸಲಹೆಗಳು)

Leave a Reply

Your email address will not be published. Required fields are marked *